‘ಪಾರು’ಗೆ ‘ಯು - ಜೂನ್ ಎರಡನೇ ವಾರ ತೆರೆಗೆ
Posted date: 04 Wed, Jun 2014 – 10:16:59 AM

ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ ‘ಯು ಅರ್ಹತಾ ಪತ್ರವನ್ನು ಪಡೆದ ಮೇಲೆ ‘ಪಾರು ವೈಫ್ ಆಫ್ ದೇವದಾಸ್’ ಜೂನ್ ತಿಂಗಳ ಎರಡನೇ ವಾರದಲ್ಲಿ ಚಿತ್ರಮಂದಿರದಲ್ಲಿ ಬರಲು ಅಣಿಯಾಗುತ್ತಿದೆ.

‘ಪಯಣ, ‘ಸಂಚಾರಿ’ ಸಿನಿಮಾಗಳ ನಂತರ ಕಿರಣ್ ಗೋವಿ ಅವರ ತೃತೀಯ ಚಿತ್ರ ‘ಪಾರು ವೈಫ್ ಆಫ್ ದೇವದಾಸ್’ ನವಿರಾದ ಪ್ರೇಮ, ಕುತೂಹಲಗಳ ಸಂಗಮ ಇದ್ದು ಕೃಷ್ಣ ದೇವೇಗೌಡ ಅವರು ಮುಕ್ತಾರ್ ನಿರ್ಮಾಕರಾಗಿದ್ದು ಹನುಮಂತಪ್ಪ ಕಾರ್ಯನಿರ್ವಾಹಕ ನಿರ್ಮಾಪಕರಾಗಿದ್ದಾರೆ.

ರಮೇಶ್ ರಾಜ್ ಅವರ ಛಾಯಾಗ್ರಹಣ, ಅರ್ಜುನ್ ಜನ್ಯ ಅವರ ಸಂಗೀತ, ಫಳಣಿ ರಾಜ್ ಅವರ ಸಾಹಸವಿದ್ದು ಶ್ರೀನಗರ ಕಿಟ್ಟಿ ಹಾಗೂ ಸೌಂದರ್ಯ ಜೋಡಿಗಳಾಗಿ ಅಭಿನಯಿಸಿದ್ದು ಇದೊಂದು ಪ್ರೀತಿಯ ನಶೆ ಇರುವ ಚಿತ್ರ ಎನ್ನುತ್ತಾರೆ. ನೇಹ ಪಾಟಿಲ್, ಲಯೇಂದ್ರ, ಮೋಹನ್ ಜುನೇಜ, ವಿ ಮನೋಹರ್ ಇತರ ತಾರಾಗಣದಲ್ಲಿ ಇದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed